ಕಮಲಾ ಕೋಟೆ (ಕಮ್ಲಾಘರ್ ಅಥವಾ ಕಮಲಾಹ್ ಗರ್ಹ್) ೧೭ ನೇ ಶತಮಾನದ ಕೋಟೆಯಾಗಿದ್ದು, ಇದು ಹಿಮಾಚಲ ಪ್ರದೇಶದ ಕಮ್ಲಾ ಗ್ರಾಮದ ಬಳಿ ಇದೆ. ೧೬೨೫ ರಲ್ಲಿ ಭಾರತದಲ್ಲಿ ಮಂಡಿಯ ರಾಜನಾದ ಸೂರಜ್ ಸೇನ್ ಇದನ್ನು ನಿರ್ಮಿಸಿದನು ಎಂದು ಹೇಳಲಾಗುತ್ತದೆ. ಮಂಡಿ ಸಾಮ್ರಾಜ್ಯವು ತನ್ನ ಭದ್ರತೆ ಸಲುವಾಗಿ ತನ್ನ ಕೋಟೆಗಳ ಮೇಲೆ ಅವಲಂಬಿತವಾಗಿತ್ತು. ಕಮಲಾ ಕೋಟೆಯು ಸೂರಜ್ ಸೇನ್ ಆಳ್ವಿಕೆಯಿಂದ ಈಶ್ವರಿ ಸೇನ್ (೧೮೭೮-೧೮೨೬) ರವರೆಗಿನ ಮಂಡಿ ರಾಜ್ಯದವರೆಗೆ ಪ್ರತಿಷ್ಠಿತ ೩೬೦ ಕೋಟೆಗಳ ಅತ್ಯಂತ ಸುರಕ್ಷಿತ ಭಂಡಾರವೆಂಬ ಖ್ಯಾತಿಯನ್ನು ಹೊಂದಿತ್ತು. ಮಹಾರಾಜ ರಂಜಿತ್ ಸಿಂಗ್ ೧೮೩೦ ರಲ್ಲಿ ಕೋಟೆಯ ಮೇಲೆ ದಾಳಿ ಮಾಡಿದನು. ಇದನ್ನು ೧೮೪೦ ರಲ್ಲಿ ನಾಶಪಡಿಸಿ , ಕೆಲವು ವರ್ಷಗಳ ನಂತರ ಮರುಪಡೆಯಲಾಯಿತು. ನಂತರ ಮಂಡಿ ರಾಜರು ಇದರ ಪುನರ್‌ನಿರ್ಮಾಣ ಮಾಡಿದರು. == ಉಲ್ಲೇಖಗಳು ==